
6th December 2024
*ಮಧ್ಯಾಹ್ನ ಉಪಹಾರ ಯೋಜನೆ,ಅಡಿಯಲ್ಲಿ ದಿನಾಂಕ ಮುಗಿದ ರಾಗಿ ಪೌಡರ್, ದಿನಾಂಕ ಹೆಚ್ಚು ಕಡಿಮೆ ಇರುವ ಹಾಲಿನ ಪೌಡರ್ ಸರಬರಾಜು.* ಬಳ್ಳಾರಿ (5) ಜಿಲ್ಲೆ ಯ ಕೆಲ ತಾಲೂಕಿನ ಶಾಲೆಗಳು ಗೆ ಅವದಿ ಮುಗಿದ ರಾಗಿ ಪೌಡರ್ ,ದಿನಾಂಕ ಹೆಚ್ವು ಕಡಿಮೆ ಇರುವ ಹಾಲಿನ ಪೌಡರ್ ಸರಬರಾಜು ಆಗಿದೆ.
ನಗರದ ಬಂಡಿ ಹಟ್ಟಿ ಪ್ರದೇಶದ ಮಹಾತ್ಮ ಗಾಂಧಿ ಶಾಲೆ ಗೆ ದಿನಾಂಕ ಹೆಚ್ಚು ಕಡಿಮೆ ಇರುವ ಹಾಲಿನ ಪೌಡರ್ ಸರಬರಾಜು ಅಗಿದ್ದು ಬಯಲು ಗೆ ಬಂದಿದೆ.ಶಾಲೆ ಮುಖ್ಯಸ್ಥರು ಬಂಡಿಹಟ್ಟಿ ಮಹೇಶ್ ಅವರು ಹಾಲಿನ ಪೌಡರ್ ಪರಿಶೀಲನೆ ಮಾಡಿ ಸಹಾಯಕ ನಿರ್ದೇಶಕ ಕಚೇರಿ ಗೆ ತೆಗೆದುಕೊಂಡು ಬಂದು ವಿಚಾರಸಲಾಗಿದ್ದು ದಿನಾಂಕ ಹೆಚ್ಚು ಕಡಿಮೆ ಆಗಿದ್ದು ಬಯಲು ಗೆ ಬಂದಿದೆ. ಇದೇ ಸಂದರ್ಭದಲ್ಲಿ ಏಳುಬೆಂಚಿ ಮುಂತಾದ ಶಾಲೆ ಗಳು ಗೆ ದಿನಾಂಕ ಮುಗಿದ ರಾಗಿ ಪೌಡರ್ ಸರಬರಾಜು ಅಗಿದೆ.ಹಾಲು ಪೌಡರ್ ಮತ್ತು ರಾಗಿ ಪೌಡರ್ ನಂದಿನಿ ಕೆ.ಎಂ.ಎಫ್. ದಿಂದ ಸರಬರಾಜು ಅಗಿದೆ. ಮಕ್ಕಳುಗೆ ಇದನ್ನು ಶಾಲೆ ಕೊಟ್ಟಿದ್ದು ಮಾಹಿತಿ ಇಲ್ಲ.KMF ಅಧಿಕಾರಿಗಳು ಕೂಡ ಪರಿಶೀಲನೆ ಮಾಡಿದ್ದಾರೆ. ಬಿಸಿ ಉಟ ಅಧಿಕಾರಿಗಳು ಮಾತ್ರ ಶಾಲೆ ಗಳು ಗೆ ಸರಬರಾಜು ಮಾಡಲು ಇಂಡಿಂಟ್ ನೀಡಲಾಗುತ್ತದೆ, ಸರಬರಾಜು ಜವಾಬ್ದಾರಿ ಕೆ.ಎಂ ಎಫ್ ಅವರದ್ದು ಆಗಿರುತ್ತದೆ ಎಂದು ಸಹಾಯಕ ನಿರ್ದೇಶಕರು ಶಿಕ್ಷಣ ಅಧಿಕಾರಿಗಳು ಅಗಿರವ ಕಸ್ತೂರಿ ಅವರು ಹೇಳಿದ್ದಾರೆ. ತಕ್ಷಣವೇ ಮೇಲಿನ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು, ತಿಳಿಸಿದ್ದಾರೆ. ಇಂತಹ ಕಳಪೆ ಪದಾರ್ಥಗಳು ಎಲ್ಲಿಎಲ್ಲಿ ಸರಬರಾಜು ಆಗಿದೆ, ಅನ್ನುವ ಮಾಹಿತಿ,ಇದಕ್ಕೆ ಕಾರಣ ಭೂತರು ಯಾರೆಂದು ತಿಳಿಯಬೇಕು. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)
undefined